ಬಸವಣ್ಣ   
  ವಚನ - 1101     
 
ಎನ್ನಿಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವೆನು. ಅವಾವುವಯ್ಯಾ ಎಂದಡೆ: ‘ಜಲಗಂಧಾಕ್ಷತಂ ಚೈವ ಪುಷ್ಪಂ ಚ ಧೂಪದೀಪಯೋ ನೈವೇದ್ಯಂ ಚೈವ ತಾಬೂಲಂ ಯಥೇಚ್ಛಾಷ್ಟವಿಧಾರ್ಚನಮ್’ ಇನ್ನು ಷೋಡಶೋಪಚಾರಗಳು: ‘ಸುಖತಲ್ಪಂ ಸುವಸ್ತ್ರಂ ಚ ಆಭರಣಾನುಲೇಪನಮ್ ಛತ್ರಚಾಮರವ್ಯಜನಂ ದರ್ಪಣಂ ನಾದ ವಾದ್ಯಯೋಃ ನೃತ್ಯ ಗೀತಂ ತಥಾ ಸ್ತೋತ್ರಂ ಪುಷ್ಪಾಂಜಲೀ ಪ್ರಣಮ್ಯಕಮ್‌ʼ ಪ್ರದಕ್ಷಿಣಂ ಚ ಮೇ ಯುಕ್ತಂ ಷೋಡಶಂ ಚೋಪಚಾರಕಂ ಈ ಕ್ರಮವಿಡಿದು ಇಷ್ಟಲಿಂಗಾರ್ಚನೆಯ ಮಾಡಿ ನಿಮ್ಮಲ್ಲಿ ಕೂಡುವೆನು, ಕೂಡಲಸಂಗಮದೇವಾ.