ಬಸವಣ್ಣ   
  ವಚನ - 1110     
 
ಒಡಲಿಲ್ಲದ ಭಕ್ತನ ಪರಿಯ ನೋಡಾ, ಮನಪ್ರಾಣಮುಕ್ತ, ಭವರಹಿತಜಂಗಮದ ಪರಿಯ ನೋಡಾ. ಸಿಡಿಲ ಮಿಂಚಿನ ಬೆಳಗನೊಂದೆಡೆಯಲ್ಲಿ ಹಿಡಿಯಲುಂಟೆ? ಉಭಯ ಒಂದಾದವರ ಕಂಡಡೆ, ನೀವೆಂಬೆ ಕೂಡಲಸಂಗಮದೇವಾ.