ಬಸವಣ್ಣ   
  ವಚನ - 1115     
 
ಒತ್ತಿ ಹೊಸೆದ ಕಿಚ್ಚ ನಾ ಮಾಡಿದೆನೆಂದು ಮುಟ್ಟಿ ಹಿಡಿದಡೆ, ಕೈ ಬೇಯದಿಹುದೆ? ಎನ್ನಿಂದಾಯಿತ್ತು, ಎನ್ನಿಂದಾಯಿತ್ತು, ಎನ್ನಿಂದಾಯಿತ್ತು ಎನ್ನದಿರು ಮನವೆ, ನಾನು ಮಾಡಿದೆನೆನ್ನದಿರು ಮನವೆ. ಕೂಡಲಸಂಗಮದೇವ ಕೇಳಯ್ಯಾ, ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು.