ಬಸವಣ್ಣ   
  ವಚನ - 1116     
 
ಓಡದಿರು, ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ, ನೋಡುವೆನು ಕಣ್ಣತುಂಬ, ಆಡಿ ಪಾಡಿ ನಲಿದಾಡುವೆ. ಬೇಡೆನ್ನ ಕೂಡೆ ಮಾತಾಡಲಾಗದೆ, ಎಲೆ ಶಿವನೆ. ಕೂಡಲಸಂಗಮದೇವಾ, ನೀನಾಡಿಸುವ ಬೊಂಬೆ ನಾನು.