ಬಸವಣ್ಣ   
  ವಚನ - 1121     
 
ಕಂಗಳಿಲ್ಲದ ನೋಟ, ಲಿಂಗವಿಲ್ಲದ ಮಾಟ, ಜಂಗಮವಿಲ್ಲದೂಟ, ಪ್ರಸಾದವಿಲ್ಲ(ದ) ಪರ, ಹಿಂಗಿತ್ತು ಶಿವಲೋಕವಿನ್ನೆಲ್ಲಿಯದೊ? ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ ಹಿಂಗಿತ್ತು ಶಿವಲೋಕವಿನ್ನೆಲ್ಲಿಯದೊ? ಬಂದ ಸಮಯವನರಿಯದೆ ಉದರವ ಹೊರೆವವರ ಕೂಗಿಡೆ ನರಕದಲ್ಲಿಕ್ಕನೆ ಕೂಡಲಸಂಗಮದೇವ?