ಬಸವಣ್ಣ   
  ವಚನ - 1124     
 
ಕಂಡಡೆ ಕಡುಸುಖವೆನಗೆ, ಕಾಣದಿರ್ದಡೆ ಅವಸ್ಥೆಯಯ್ಯಾ. ತವಕದ ಸ್ನೇಹ ದರ್ಶನದಲ್ಲಿ ತರಹರವಾಯಿತ್ತು. ಕೂಡಲಸಂಗಮದೇವಯ್ಯಾ, ನಿಮ್ಮ ಶ್ರೀಪಾದವ ಕಂಡು ಧನ್ಯನಾದೆನು.