ಬಸವಣ್ಣ   
  ವಚನ - 1132     
 
ಕಪ್ಪೆಯ ಶಿರದ ಮೇಲೆ ಎಪ್ಪತ್ತೆರಡು ಪುರವ ಕಂಡೆ, ಆ ಪುರದೊಳಗೊಬ್ಬ ನಾರಿಯ ಕಂಡೆ, ಆ ನಾರಿಯ ಕೈಯಲ್ಲಿ ನಾರಿವಳ ಸಸಿಯ ಕಂಡೆ. ಇಂತಪ್ಪ ಬೆಡಗಿನ ಕೀಲ ಬಲ್ಲಾತನೆ ಪ್ರಾಣಲಿಂಗಸಂಬಂಧಿಯೆಂದೆನಯ್ಯಾ, ಕೂಡಲಸಂಗಮದೇವಾ.