ಬಸವಣ್ಣ   
  ವಚನ - 1138     
 
ಕಾಣಬಾರದ ಘನವ ಕರಸ್ಥಲದಲ್ಲಿ ತೋರಿದ, ಹೇಳಬಾರದ ಘನವ ಮನಸ್ಥಲದಲ್ಲಿ ತೋರಿದ, ಉಪಮಿಸಬಾರದ ಘನವ ನಿಮ್ಮ ತೃಪ್ತಿಯ ಮುಖದಲ್ಲಿ ತೋರಿದ. ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ ಚೆನ್ನಬಸವಣ್ಣನು ತೋರಿದನಾಗಿ ಆನು ಬದುಕಿದೆನು ಕಾಣಾ ಕೂಡಲಸಂಗಮದೇವಾ.