ಬಸವಣ್ಣ   
  ವಚನ - 1142     
 
ಕಾಯದ ಕಪಟವು ಬಿಡದೆನಗಿನ್ನೆಂತಯ್ಯಾ? ಮಾಯಾಪ್ರಪಂಚಿನ ಬಲೆಯೊಳಗೆ ಸಿಲುಕಿದೆ, ವಾಯದ ಸಂಭ್ರಮವಧಿಕ ಹಿರಿದೆನಗೆ, ಇದಾವ ಭಾವದ ಮುಖವೆಂದರಿಯದೆ, ಜ್ಞಾನಶೂನ್ಯವಾಗಿರ್ದೆನಯ್ಯಾ. ಅಷ್ಟಮದಂಗಳನು ಸೃಷ್ಟಿಸಿಯಿದ್ದಿರಾಗಿ ಕಟ್ಟುಗ್ರದಿಂದ ನಿಮ್ಮ ಕಾಣಲೀಯವು. ಎನ್ನ ತನುವಿನ ಅವಗುಣ, ಮನದ ಮರ್ಕಟತನ ಬಿಡದು, ನೀನೇ ಗತಿ ಕೂಡಲಸಂಗಮದೇವಾ, ನಿಮ್ಮ ಶರಣರ ಇರವನರಿಯದೆ ಭವದುಃಖಿಯಾದೆನಯ್ಯಾ.