ಬಸವಣ್ಣ   
  ವಚನ - 1144     
 
ಕಾಯದ ಕುರುಹುವಿಡಿದು ಬಂದೆನೆಂಬ ಆ ಭಾವದ ಇರವೇತಕ್ಕೆ ನಿಮಗೆ? ಅಂಬರದ ಚಾಪ ಮುಗಿಲೊಳಗೆ ಹೊಂದಿತ್ತೆ? ಬೇರೊಂದರಲ್ಲಿ ಸಂದಿತ್ತೆ? ಅದರಂಗದ ಛಾಯೆ. ಪ್ರಭುದೇವರ ನಿಂದ ಸುಳುಹು ಕೂಡಲಸಂಗಮದೇವರಲ್ಲಿ ಭಿನ್ನವಿಲ್ಲದೆ ನಿಂದ ಕಾಯದಂ (ದ).