ಬಸವಣ್ಣ   
  ವಚನ - 1152     
 
ಕುಂಡಲಿಗನೊಂದು ಕೀಡೆಯ ತಂದು ತನ್ನಂತೆ ಮಾಡಿತಲ್ಲಾ, ಎಲೆ ಮಾನವಾ, ಕೇಳಿ ನಂಬಯ್ಯಾ, ನೋಡಿ ನಂಬಯ್ಯಾ, ಎಲೆ ಮಾನವಾ. 'ತ್ವಚ್ಚಿಂತಯಾ ಮಹಾದೇವ ತ್ವಾಮೇವೈತಿ ನ ಸಂಶಯಃ ಭ್ರಮದ್‍ಭ್ರಮರಚಿಂತಾಯಾಂ ಕೀಟೋಪಿ ಭ್ರಮರಾಯತೇ' ಕೂಡಲಸಂಗನ ಶರಣರ ಅನುಭಾವ ಇದರಿಂದ ಕಿರುಕುಳವೆ, ಎಲೆ ಮಾನವಾ.