ಬಸವಣ್ಣ   
  ವಚನ - 1153     
 
ಕುಲವನರಸುವರೆ ? ಇದರೊಳು ಛಲವನರಸುವರೆ? ಹೊಲೆಗೇರಿಯಲೊಂದು ಎಲುವಿನ ಮನೆಗಟ್ಟಿ ತೊಗಲಹೊದಿಕೆ, ನರವಿನ ಹಂಜರ ಕುಲವನರಸುವರೆ ? ಹೊಲತಿ ಹೊಲೆಯ(ನು) ಹೋಗಿ ಹೊಲೆಯಲ್ಲಿ ಮಿಂದಡೆ ಹೊಲೆ ಹೋಯಿ(ತ್ತಿ)ಲ್ಲ, ಕುಲ ಹೋಗಲಿಲ್ಲ. ಕಂಬಳಿಯೊಳಗೆ ಕೂಳಕಟ್ಟಿ ಕೂದಲನರಸುವರೆ? ಇಂಥ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ.