ಬಸವಣ್ಣ   
  ವಚನ - 1159     
 
ಕೆಳಗೇಳು ಲೋಕ, ಮೇಲೇಳು ಲೋಕ- ಇಂತೀ ಹದಿನಾಲ್ಕು ಲೋಕಕ್ಕೆ ನೀನೊಡೆಯ, ನಿನಗೆನ್ನ ಪಾಲಕರು ಭಕ್ತರೊಡೆಯರು. ನಮ್ಮವರಿಂದ ನಿನ್ನ ಸೂತಕ ಹೋಯಿತ್ತಲ್ಲದೆ ನಿನ್ನಿಂದ ಒಂದು ತೃಣ ಮಡಿಯದು ಕಾಣಾ, ಕೂಡಲಸಂಗಮದೇವಾ.