ಬಸವಣ್ಣ   
  ವಚನ - 1164     
 
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೊ. ನರಮಾನವರು ಕೊಡುವರೆಂಬವರ ಬಾಯಲಿ ಬಾಲಹುಳುಗಳು ಸುರಿಯವೆ ? ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ.