ಬಸವಣ್ಣ   
  ವಚನ - 1166     
 
ಕೋಡಗವೇಡಿಸಬೇಡೆಂದಡೆ ಮಾಣದಯ್ಯ, ತೋಡುವ ಹೆಗ್ಗಣ ಮಾಳಿಗೆ ಎಂದಡೆ ಮಾಣದಯ್ಯ, ಗಾಡಿಗ ದೂಷಕನವರವರನಾಡುವುದೆ ನೇಮ. ಕೂಡಲಸಂಗಮದೇವಾ, ಇದವರ ಕಾಯಕವಯ್ಯಾ.