ಬಸವಣ್ಣ   
  ವಚನ - 1174     
 
ಗುರುಲಿಂಗಜಂಗಮದ ಹೆಸರಿನಿಂದ ಕಾಯಕವ ಮಾಡಿ, ಗುರು ಚರಕೆ ವಂಚಿಸಿ, ತಾಯಿ ತಂದೆ, ಬಂಧುಬಳಗ, ಹೆಂಡತಿ, ಒಡಹುಟ್ಟಿದವರು ಎಂದು ಸಮಸ್ತಪದಾರ್ಥವ ಚಾಗೆಯ ಮಾಡುವನೊಬ್ಬ ಭಕ್ತದ್ರೋಹಿ ನೋಡಾ, ಕೂಡಲಸಂಗಮದೇವಾ.