ಬಸವಣ್ಣ   
  ವಚನ - 1178     
 
ಗುರುವಿಂಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು, ಜಂಗಮಕ್ಕೆ ಧನವ ಕೊಟ್ಟು, ಇಂತೀ ತ್ರಿವಿಧಕ್ಕೆ ತ್ರಿವಿಧವ ಕೊಟ್ಟು ನಾನು ಶುದ್ಧನಾದೆನು ಕಾಣಾ, ಕೂಡಲಸಂಗಮದೇವಾ.