ಬಸವಣ್ಣ   
  ವಚನ - 1204     
 
ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು ಪ್ರಾಣ, ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರು. ಇಂತೀ ಗುರುಲಿಂಗಜಂಗಮಪ್ರಸಾದವ ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ ಸಂದೇಹಿ ವ್ರತಗೇಡಿಗಳನೇನೆಂಬೆ? ಅಂತವರ ಮುಖವ ತೋರದಿರು, ಕೂಡಲಸಂಗಮದೇವಾ.