ಬಸವಣ್ಣ   
  ವಚನ - 1205     
 
ತನುವೆಂತಿರ್ದಡೇನಯ್ಯಾ ಮನ ನಿರ್ಮಳವಾಗಿರ್ದಡೆ ಸಾಲದೆ? ಎಂತಿರ್ದಡೇನು ಲಿಂಗಭಕ್ತ, ಎಂತಿರ್ದಡೇನು ಲಿಂಗಶರಣ ಎಂತಿರ್ದಡೇನು ನೋಡಯ್ಯಾ. ಶಿಶು ನೊಂದಡೆ ತಾಯಿ ನೊಂದಂತೆ ಕೂಡಲಸಂಗಮದೇವಾ.