ಬಸವಣ್ಣ   
  ವಚನ - 1208     
 
ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತು, ಎನ್ನ ಹಿಂದನೆಚ್ಚರಿಸಿ, ಮುಂದಣ ಸ್ಥಿತಿಗತಿಯನರುಹಿ, ಸಂದೇಹವ ಬಿಡಿಸಿದೆ. ಎನ್ನ ಕಂದುಕಲೆಯ ಕಳೆವ ತಂದೆ ನೀನಿರುತ್ತಿರಲು, ಎನಗಿನ್ನಾವ ದಂದುಗವೂ ಇಲ್ಲ ನೋಡಾ. ಬಂದ ಕಾರ್ಯದ ಹದನಿನ್ನೆಂದು ಸಯವಪ್ಪುದು? ಕೂಡಲಸಂಗಮದೇವರು ಎನ್ನನಿತ್ತ ಬಾರೆಂಬ ಕಾಲವ ತಿಳುಹಾ, ಚೆನ್ನಬಸವಣ್ಣಾ.