ಬಸವಣ್ಣ   
  ವಚನ - 1209     
 
ತಿರುಕರೆನ್ನದಿರಿ ಭೋ ! ಎನ್ನ ತಂದೆಗಳನು, ತಿರುಕರೆನ್ನದಿರಿ ಭೋ ! ಎನ್ನ ಬಂಧುಗಳನು, ತಿರುಕರೆನ್ನದಿರಿ ಭೋ ! ಎನ್ನ ದೇವರನು, ತಿರುಕರೆನ್ನದಿರಿ ಭೋ ! ಎನ್ನ ಒಡೆಯರನು. ದೇಹಿ ಎಂದಡೆ ನಾಸ್ತಿ ಎಂಬವರ ಬೇಹು ನೋಡಬಂದ ಕಾಣಾ, ಕೂಡಲಸಂಗಮದೇವ.