ಬಸವಣ್ಣ   
  ವಚನ - 1210     
 
ತೊಂಡಿಲ ಮುಡಿದುಕೊಂಡು, ತಮ್ಮ ತಮ್ಮ ಗಂಡರ ಹಿಂದುಗೊಂಡು ನಾಡ ಮಿಂಡರ ನೋಡುತ್ತಲಿ, ಇಂದು ನಮ್ಮ ಹುಲಿ ಹೋಯಿತ್ತು ಬನ್ನಿರೆ. ಗಂಡರ ಗಂಡನವ್ವಾ ಕೂಡಲಸಂಗ, ಕಂಡಡೆ ಮೂಗ ಕೊಯಿವಾ.