ಬಸವಣ್ಣ   
  ವಚನ - 1211     
 
ತೊತ್ತಿನ ತೊತ್ತಿನ ಮರುದೊತ್ತಿನೊಡನೆ ಮುನಿವುದು ನಿಮಗೆ ಗುಣವೆ? ಅಯ್ಯಾ ಅಯ್ಯಾ, ನಿಮ್ಮ ಧರ್ಮದವ ನಾನಯ್ಯಾ. ಒಮ್ಮಿಂಗೆ ಕೃಪೆ ಮಾಡಿ ಕರುಣಿಸಯ್ಯಾ. ಕೂಡಲಸಂಗಮದೇವಾ, ಇಲಿಗಂಜಿ ಮನೆ ಸುಡುವರುಂಟೆ?