ಬಸವಣ್ಣ   
  ವಚನ - 1213     
 
ತೋರಲಿಲ್ಲದ ಸಿಂಹಾಸನದ ಮೇಲೆ ಹೇಳಬಾರದ ಘನವು ಬಂದೆರಗಿದಡೆ, ತೋರಿ ಮೆರೆವ ಸಂಗಮನಾಥನು ಎದ್ದು ಹೋದನು. ನೀಡ ನೀಡ ಸಯದಾನವೆಲ್ಲವೂ ನಿರ್ವಯಲಾಯಿತ್ತು, ಮಾಡ ಮಾಡ ಸಯದಾನವ ಮರಳಿನೋಡಲಿಲ್ಲ. ಇದನೇನ ಹೇಳುವೆ ಅನಿಯಮ ಚರಿತ್ರವನು? ಇದೆಂತುಪಮಿಸುವೆನು ವಿಸ್ಮಯವನು? ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಯ್ಯಾ, ಚೆನ್ನಬಸವಣ್ಣಾ.