ಬಸವಣ್ಣ   
  ವಚನ - 1217     
 
ದಾಸನಿಗೆ ದೇವರುಂಟಾದರೆ ವರಾಹನ ತಿಂಬನೆ? ಬ್ರಾಹ್ಮಣಂಗೆ ದೇವರುಂಟಾದರೆ ತೊಳಸಿಯಂ ಬಿತ್ತಿ ಶರಣೆಂದು ತಲೆಯಂ ಚಿವುಟಿ ತಿಂಬನೆ? ಮೈಲಾರಂಗೆ ದೇವರುಂಟಾದರೆ ಕೊರಳಲ್ಲಿ ಕವಡೆಯಂ ಕಟ್ಟಿ ನಾಯಾಗಿ ಬೊಗಳುವನೆ? ಜೋಗಿಗೆ ದೇವರುಂಟಾದರೆ ಮತ್ಸ್ಯವ ತಿಂಬನೆ? ಇಂತೀ ತಮ್ಮ ದೇವರ ತಾವೆ ತಿಂಬವರ ನಮ್ಮ ಶಿವಭಕ್ತರಿಗೆ ಸರಿಯೆಂದವರ ನಮ್ಮ ಉತ್ತಣ್ಣಗಳ ಎಡದ ಪಾದರಕ್ಷೆಯಲ್ಲಿ ಹೊಯಿದರು ಕೂಡಲಸಂಗಮದೇವ