ಬಸವಣ್ಣ   
  ವಚನ - 1219     
 
ದೇವ ದೇವ ಮಹಾಪ್ರಸಾದ! ಅವಧರಿಸಯ್ಯಾ ಎನ್ನ ಬಿನ್ನಹವ: ಅತಳ, ವಿತಳ, ಸುತಳ, ರಸಾತಳ, ತಳಾತಳ, ಮಹಾತಳ, ಪಾತಾಳಾದಿ ಲೋಕದಿಂದತ್ತತ್ತ ನಿಮ್ಮ ಶ್ರೀಚರಣ. ಭೂಲೋಕ ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪೋಲೋಕ, ಸತ್ಯಲೋಕದಿಂದತ್ತತ್ತ ನಿಮ್ಮ ಉತ್ತಮಾಂಗ, ತರುವಿನೊಳಗೆ ಅನಲ ಭರಿತನಾಗಿರ್ದು ಮಥನದಿಂದ ತೋರಿ ಆಹುತಿಗೊಂಬಂತೆ, ಸರ್ವಕರ್ತೃ ನಿತ್ಯಾನಂದಮಯನೆ, ಭಕ್ತಿಲೀಲಾವಿನೋದನೆ, ಕೂಡಲಸಂಗಮದೇವಾ, ಸುಚಿತ್ತದಲ್ಲಿ ಮನಮೀಸಲಬೋನವನಾರೋಗಿಸಯ್ಯಾ.