ಬಸವಣ್ಣ   
  ವಚನ - 1224     
 
ದೇವರ ದೇವಾ! ಮಲಯಜದಿಂದ ಮೇಲೆ ಮಲಯಜವುಂಟೆ? ಪರುಷದಿಂದ ಮೇಲೆ ಪರುಷವಾವುದುಂಟೆ? ಅಯ್ಯಾ ಅಮೃತಾಹಾರದಿಂದಂ ಮೇಲೆ ಭೋಜನವಾವುದುಂಟೆ? ಅಯ್ಯಾ, ನಿಮ್ಮಿಂದೊಂದಾಶ್ಚರ್ಯವ ಕಂಡೆನೆಂಬುದ ಎನಗೆ ನಿರೂಪಿಸಾ ಕೂಡಲಸಂಗಮದೇವಾ, ಪ್ರಭುವೆ.