ಬಸವಣ್ಣ   
  ವಚನ - 1225     
 
ದೇವರು ಕಾಮನ ಕೊಂದನೆಂಬರು, ದೇವಂಗಿಬ್ಬರು ಹೆಂಡಿರುಂಟು, ದೇವರು ಕಾಮನ ಕೊಂದುದಿಲ್ಲ ಕಾಣಿ ಭೋ ! ಕಾಮವೈರಿಗಳು, ಕಾಮನ ಕೊಂದ ಮೂವರಿತ್ತಲೈದಾರೆ- ಕೂಡಲಸಂಗಯ್ಯನಲ್ಲಿ ಶುಕನು, ಸೊನ್ನಲಿಗೆಯ ಸಿದ್ಧರಾಮಯ್ಯನು, ಹನುಮಂತನು.