ಬಸವಣ್ಣ   
  ವಚನ - 1234     
 
ನಂಬಿದೆನಯ್ಯಾ ನಾನು, ನಚ್ಚಿದೆನಯ್ಯಾ ನಾನು, ಬದುಕಿದೆನಯ್ಯಾ ನಾನು ನಿಮ್ಮ ಕೃಪೆಯಿಂದಲಿ, ಹಾಳು ಕುಳಿಯಲ್ಲಿ ಬಿದ್ದ ಪಶುವಿನ ಕರುವ ತೆಗೆದು ತಾಯ ಮುಖವ ತೋರುವಂತೆ, ಪಾಪಕೂಪದಲ್ಲಿ ಬಿದ್ದವನನೆಬ್ಬಿಸಿ ಕೂಡಲಸಂಗನ ಶರಣರ ಚರಣವ ತೋರಿ, ಎನ್ನನುಳುಹಿದನು. ಹೋದ ಜೀವಕ್ಕೆ ತನ್ನ ಕರುಣವೆಂಬ ಮರುಜವಣಿಯ ಹಿಂಡಿ ಎತ್ತಿದನು, ಚೆನ್ನಬಸವಣ್ಣನಿಂದಲೆಂತಕ್ಕೆ ಬದುಕಿದೆನು.