ಬಸವಣ್ಣ   
  ವಚನ - 1237     
 
ನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿ, ಆ ನಡೆನುಡಿ ಎರಡರ ಚೆನ್ನ ಮೃಡ ನಿಮ್ಮೊಳಗಡಗಿಸಿ, ತಾವೆಡೆಯಿಲ್ಲದೆ ಪರಿಪೂರ್ಣರಾದವರ ಪಡುಗವ ಹೊರುವೆ, ಪಾದರಕ್ಷೆಯ ಹಿಡಿವೆ, ಎನಗಿದೆ ಮಾಟ, ಬಯಸುವ ಬೇಟ. ಕೂಡಲಸಂಗಮದೇವಾ, ಇದು ನಿಮ್ಮ ಕೂಡುವ ಕೂಟ.