ಬಸವಣ್ಣ   
  ವಚನ - 1239     
 
ನಾನಾ ಭವದುಃಖದಲ್ಲಿ ಹುಟ್ಟಿದ ಪ್ರಾಣಿಯ(ನಿ)ಲ್ಲಿ ತಂದೆ; ಇನ್ನು ಹುಟ್ಟಲಾರೆನು, ಹೊಂದಲಾರೆನು, ಜನನ ಮರಣವೆಂಬೆರಡಕ್ಕೆ ಹೊರಗಾದೆನಯ್ಯಾ. ನೀವು ಹೇಳಿದ ಮಣಿಹವ ಮಾಡಿದೆ, ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ.