ಬಸವಣ್ಣ   
  ವಚನ - 1250     
 
ನಿನಗೆ ಮಜ್ಜನಕ್ಕೆರೆವುದಕ್ಕೆ ಮೂಂಚುಟಾಗಿ ಶ್ರೀಗುರುವಿನ ಪಾದೋದಕವ ಕೊಂಬೆ, ನಿನಗಾರೋಗಣೆಯ ಮಾಡಿಸುವುದಕ್ಕೆ ಮೂಂಚುಟಾಗಿ ಶ್ರೀಗುರುವಿನ ಪ್ರಸಾದವ ಕೊಂಬೆ. ಎನಗೆಯೂ ನಿನಗೆಯೂ ಸಹಭೋಜನ, ಎನಗೆಯೂ ನಿನಗೆಯೂ ಏಕಾರ್ಥಶಯನ, ನೀನೆನಗೆ ಚಿಕ್ಕ ತಮ್ಮ, ಕೂಡಲಸಂಗಮದೇವಾ.