ಬಸವಣ್ಣ   
  ವಚನ - 1254     
 
ನಿಮ್ಮ ನೋಡ ನೋಡಲೆನ್ನ ಹರಣವಿದ್ದುದ ಕಂಡೆ, ನಿಮ್ಮನಗಲಲೊಡನೆ ಎನ್ನ ಹರಣವಿಲ್ಲಯ್ಯಾ. ಇರುಳೊಂದು ಜುಗ ಮೇಲೆ ಕೆಡೆದಂತೆ, ಆಳವಾಡಿ ಕಳೆವೆನಯ್ಯಾ, ಹಗಲೆಲ್ಲ ಹಂಬಲಿಸಿ ಹಲುಬಲೇನಯ್ಯಾ, ಕೂಡಲಸಂಗನ ಶರಣರನಗಲುವ ಧಾವತಿಯಿಂದ, ಮರಣವೇ ಲೇಸಯ್ಯಾ.