ಬಸವಣ್ಣ   
  ವಚನ - 1261     
 
ಪಂಚಬ್ರಹ್ಮಾತ್ಮಕದಿಂದುದಯವಾದ ಪಂಚಗವ್ಯ ಗೋಮಯವನು ಆಗಮಮತದಿಂದ ದಹಿಸಿ, ಸಮಸ್ತ ಜನಂಗಳು ಧರಿಸುವ ಭಸಿತವಿದು ನೋಡಾ ಕೂಡಲಸಂಗಯ್ಯಾ.