ಬಸವಣ್ಣ   
  ವಚನ - 1277     
 
ಬಲೆಗೆ ಸಿಲ್ಕಿದ ಮೃಗದಂತೆ ನಾನಯ್ಯಾ, ಮರಿದಪ್ಪಿದ ಹುಲ್ಲೆಯಂತೆ ದೆಸೆದೆಸೆಗೆ ಬಾಯಿಬಿಡುತ್ತಿದ್ದೇನೆ. ನಾನಾರ ಸಾರುವೆನಯ್ಯಾ, ತಾಯಾಗಿ ತಂದೆಯಾಗಿ ನೀನೇ, ಸಕಲ ಬಂಧುಬಳಗ ನೀನೇ ಕೂಡಲಸಂಗಮದೇವಾ.