ಬಸವಣ್ಣ   
  ವಚನ - 1281     
 
ಬಾಳತ್ವಕ್ಕೆಂದು ಮಧುವ ತಂದು ಕೊಡನ ತುಂಬಿದ ಜೇನಹುಳುವಿನಂತೆ ತಾನುಂಬುದು, ತನ್ನೆಂಜಲ ಜಗವುಂಬುದು ನೋಡಯ್ಯಾ. ಶಿವಭಕ್ತನಾಗಿ ಶಿವಾನ್ನವನೆ ಕೊಂಡು, ಒಕ್ಕಮಿಕ್ಕ ವಸ್ತುವ ಜಂಗಮಕ್ಕಿಕ್ಕುವಾತನೆ ಭಕ್ತ, ಕೊಂಡಾತನೆ ಜಂಗಮ. ನಡುವೆ ನೀ ಬಂದು ಭಂಡು ಮಾಡದಿರೈ ಕೂಡಲಸಂಗಮದೇವಾ.