ಬಸವಣ್ಣ   
  ವಚನ - 1293     
 
ಭಕ್ತಿರತಿಯೆಂಬ ಮದುವೆಗೆ- ಕಣಗಿಲೆಲೆಯ ಉಂಗುರವನಿಕ್ಕಿ, ಮೊಲ್ಲೆಮಲ್ಲಿಗೆಯ ತೆರೆಯ ಕಟ್ಟಿ, ಸೇವಂತಿಗೆಯ ಚಪ್ಪರವನಿಕ್ಕಿ, ಪುಷ್ಪಜಾತಿಗಳೆಲ್ಲಾ ನಿಬ್ಬಣವ ಬನ್ನಿರೇ. ನಮಗೆಯು ನಮ್ಮ ಕೂಡಲಸಂಗಮದೇವಂಗೆಯು ಮದುವೆ.