ಬಸವಣ್ಣ   
  ವಚನ - 1299     
 
ಭೇರುಂಡನ ಪಕ್ಷಿಗೆ ದೇಹ ಒಂದೆ, ತಲೆಯೆರಡರ ನಡುವೆ ಕನ್ನಡವ ಕಟ್ಟಿ ಒಂದು ತಲೆಯಲ್ಲಿ ಹಾಲನೆರೆದು ಒಂದು ತಲೆಯಲ್ಲಿ ವಿಷವನೆರೆದಡೆ ದೇಹವೊಂದೇ, ವಿಷ ಬಿಡುವುದೇ ಅಯ್ಯಾ? ಲಿಂಗದಲ್ಲಿ ಪೂಜೆಯ ಮಾಡಿ, ಜಂಗಮದಲ್ಲಿ ನಿಂದೆಯ ಮಾಡಿದಡೆ ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.