ಬಸವಣ್ಣ   
  ವಚನ - 1308     
 
ಮರಹಿಂದಲಾದ ಕುರುಹಿನ ಕಾಯವ ಧರಿಸಿಕೊಂಡು ಬಂದಡೆ, ಅದು ಎನಗೆ ಕುಂದಲ್ಲ ನೋಡು ದೇವಾ ! ನಿಮ್ಮ ಲೀಲೆಯಿಂದ ಹಿಂದಾರು ಜನ್ಮದಲ್ಲಿ ಬಂದಡೆ, ಅದು ನಿಮ್ಮ ಜಂಗಮಭಕ್ತಿಯಿಂದ ಕಳೆದೆ ನೋಡಯ್ಯಾ. ಕಾಯವಿಲ್ಲದ ಜಂಗಮಕ್ಕೆ ಪ್ರಾಣವಿಲ್ಲದ ಮಾಟ, ಒಲ್ಲೆನೆಂಬುದಕ್ಕೆ ಕಾರಣವೇನು ಹೇಳಾ, ಕೂಡಲಸಂಗಮದೇವಾ?