ಬಸವಣ್ಣ   
  ವಚನ - 1312     
 
ಮಹಾಲಿಂಗದ ರೂಪಂಗಳು ಮಹಾಲಿಂಗದ ಪೆಸರಲ್ಲದೆ ಲಿಂಗ ಬೇರೆ ರೂಪು ನಿರೂಪವಲ್ಲ. ಲಿಂಗ ಬೇರೆ ಕಾಯಸಂಧಿಯಲ್ಲ, ಲಿಂಗ ಬೇರೆ ಜೀವಸಂಧಿಯಲ್ಲ. ಲಿಂಗ ಬೇರೆ ಮಹಾಘನದಿಂದತ್ತಲೆ. ಕೂಡಲಸಂಗಮನ ನಿಲವು ಆರಿಗೆಯೂ ಅರಿಯಬಾರದು.