ಬಸವಣ್ಣ   
  ವಚನ - 1314     
 
ಮಾಡುವ ಮಾಡಿಸಿಕೊಂಬ ಎರಡರ ನಡುವೆ ಸಂದುಭೇದ ಉಂಟೆ ದೇವಾ? ಕಾಯ ಪ್ರಾಣದ ಸಂಗದಂತೆ ಇದ್ದುದಲ್ಲದೆ. ಬಲ್ಲಂತೆ ಮಾಡು, ಬಲ್ಲಂತೆ ನೀಡು, ನಾನರಿಯೆನೆಂಬುದು ನಿಮಗುಚಿತವೆ? ಮಾಡುವಲ್ಲಿ ನೀಡುವಲ್ಲಿ ಹೇಳಿ ಮಾಡಿಸಿಕೊಂಬುದಲ್ಲದೆ. ಕೈಕಲಸಿದಡೆ ಬಾಯಿಗೆ ಹಂಗುಂಟೆ ಕೂಡಲಸಂಗಮದೇವಾ?