ಬಸವಣ್ಣ   
  ವಚನ - 1323     
 
ಮೊರಹಾರ ನೀಡಿದಡೆ ತೆರಹಾರ ಕೊಳುತ್ತೈದಾನೆ, ಅಹುದಹುದು, ಮತ್ತೇನು? ದೇವರ ಹಸಿವು ನಮಗೆ ಹೊಸತಲಾ ! ದೆಸೆದಿಕ್ಕೆಲ್ಲಾ ವಿಶ್ವತೋಮುಖದ ಕೂಡಲಸಂಗಮದೇವಂಗೆ, ದೆಸೆದೆಸೆಯಲ್ಲಿ ನೀಡಿ.