ಬಸವಣ್ಣ   
  ವಚನ - 1326     
 
ರೂಪು ಅರೂಪಿನಲ್ಲಿ ನಿಂದಿತ್ತು, ಅರೂಪು ನಿಜರೂಪವನವಗ್ರಹಿಸಿತ್ತು. ನಿಜರೂಪು ನಿರ್ಣಯದಲ್ಲಿ ನಿಷ್ಪತ್ತಿಯಾಯಿತ್ತು, ನಿಷ್ಪತ್ತಿಯಾದ ನಿಜಶರಣರ ನಿಲವು ಕಾಯವಿಡಿದು ಕಂಡೆಹೆನೆಂದಡೆ ಕಾಣಬಹುದೆ? ಕೂಡಲಸಂಗಮದೇವರ ಶರಣ ಪ್ರಭುದೇವರ ನಿಲವು ಎನಗೆ ಸಾಧ್ಯವಪ್ಪುದೆ?