ಬಸವಣ್ಣ   
  ವಚನ - 1328     
 
ರೂಹಿಲ್ಲದ ಸಯದಾನವ ನೀಡುವೆ, ರುಚಿಯಿಲ್ಲದ ಪದಾರ್ಥವ ಮಥನಿಸದೆ ನೀಡುವೆ, ಲಿಂಗಕ್ಕೆಂದು. ಲಿಂಗಪದಾರ್ಥವನಂಗಮುಖವ ಮರೆದು ನಿಮಗೆ ನೀಡುವೆ. ಕಾಮಿಸದೆ ಕಲ್ಪಿಸದೆ ಭಾವಿಸದೆ ಭ್ರಮಿಸದೆ ನಿಮ್ಮ ಪರಿಯಾಣಕ್ಕೆ ನೀಡುವೆ. ಸುಚಿತ್ತ ಸಮಾಧಾನದಿಂದ ಅವಧರಿಸಬೇಕಯ್ಯಾ ಕೂಡಲಸಂಗಮದೇವಯ್ಯಾ.