ಬಸವಣ್ಣ   
  ವಚನ - 1335     
 
ಲಿಂಗದ ಪ್ರಾಣದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು, ಪ್ರಾಣ(ದ) ಲಿಂಗದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು. ಹೂಸಿ ಹುಂಡನ ಮಾಡಿ, ಹೊರಗನೆ ಪೂಜಿಸಿ ವೃಥಾ ದಿನಂಗಳು ಸವೆದುಹೋದವು. ಕೂಡಲಸಂಗಮದೇವರಲ್ಲಿ, ಎನ್ನ ಪ್ರಾಣ ನಿಕ್ಷೇಪವಹ ಭೇದವ ತೋರಾ ಚೆನ್ನಬಸವಣ್ಣಾ.