ಬಸವಣ್ಣ   
  ವಚನ - 1347     
 
ಲೌಕಿಕದನುಸಂಧಾನ ಸಮನಿಸದೆ ಅನ್ಯವ ಸುಟ್ಟರು. ಎನ್ನ ಹೃದಯದ ಕಂಗಳು ಲಿಂಗದಲ್ಲಿ ನಟ್ಟು ಬಗೆಯಲಾರಳವು. ಅಲ್ಲದೆ, ನಿಷ್ಠೆ ಬಲಿದು ಗಟ್ಟಿಗೊಂಡು ಅಂಗಶಂಕೆಯೆಂಬ ಭಂಗವಿನ್ನೆಲ್ಲಿಯದೊ. ಹಾಲು ಬೆರಸಿದ ನೀರ ಹಂಸೆ(ಗಾ)ಗದಂತೆ ಪಾವಕನಾದನಯ್ಯಾ ಕೂಡಲಸಂಗಮದೇವಾ ನಿಮ್ಮ ಶರಣು.