ಬಸವಣ್ಣ   
  ವಚನ - 1349     
 
ವನದ ಕೋಗಿಲೆ ಮನೆಗೆ ಬಂದಡೆ, ತನ್ನ ವನವ ನೆನೆವುದ ಮಾಣ್ಬುದೆ? ಮಲೆಯ ಗಜ ಮನೆಗೆ ಬಂದಡೆ ತನ್ನ ಮಲೆಯ ನೆನೆವುದ ಮಾಣ್ಬುದೆ? ಕೂಡಲಸಂಗನ ಶರಣರು ಮರ್ತ್ಯಕ್ಕೆ ಬಂದಡೆ ತಮ್ಮ ಆದಿಮಧ್ಯಾಂತರಂಗದ ಲಿಂಗವ ನೆನೆವುದ ಮಾಣ್ಬರೆ?