ಬಸವಣ್ಣ   
  ವಚನ - 1350     
 
ವಾಸನೆ ಕಾರಣ, ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು, ಪರಿಮಳ ಕಾರಣ, ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ, ಭಕ್ತಿ ಕಾರಣ, ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ, ಕೂಡಲಸಂಗಮದೇವಾ.