ಬಸವಣ್ಣ   
  ವಚನ - 1354     
 
ವೇದಾಗಮಂಗಳು ಹೇಳಿದ ಹಾಗೆ ನಡೆವುದು! ಹೇಳಿದಂತೆ ನುಡಿವುದು! ಮೀರಿ ನಡೆಯಲಾಗದು! ಮೀರಿ ನುಡಿಯಲಾಗದು! ಮುಕ್ತಿಪದವೈದುವಾತ. ಅಪಹಾಸ್ಯಕ್ಕೆ ಬಾರದೆ ಆಚಾರಮಾರ್ಗದಲ್ಲಿರಬಲ್ಲಡೆ ಕೂಡಲಸಂಗಮದೇವನೀಗಲೆ ಒಲಿವ.