ಬಸವಣ್ಣ   
  ವಚನ - 1362     
 
ಶಿಶುವೆನ್ನಬಹುದೆ, ನಂಬಿಯಣ್ಣನ? ಸೂಕ್ಷ್ಮನೆನಬಹುದೆ ರವಿಯನು? ಜಗವ ಬೆಳಗುವ. ದೃಷ್ಟಿ ಕಿರಿದೆನ್ನಬಹುದೆ? ಸೃಷ್ಟಿಯನು ಕಾಣ್ವ. ಭಾವ ಕಿರಿದೆನ್ನಬಹುದೆ? ಬಳ್ಳ ಲಿಂಗವಾದುದನು. ಕೂಡಲಸಂಗಮದೇವಯ್ಯಾ, ಯುಗಜುಗವೆಲ್ಲವನೂ ಮೀರಿದ ಶರಣನ ಕಿರಿದೆನಬಹುದೆ ಚೆನ್ನಬಸವಣ್ಣನ?